ಪ್ರೇಯಸಿಗೆ ಕಿರುಕುಳ ನೀಡುತ್ತಿದ್ದ ಯುವಕನ ಹತ್ಯೆಗೈದು ಪೊಲೀಸರಲ್ಲಿ ನಾಳೆ ಸರೆಂಡರ್ ಆಗುತ್ತೇನೆಂದ ಪ್ರೇಮಿ!!

ಮಂಗಳೂರು: ತನ್ನ ಪ್ರೇಯಸಿಗೆ ಕಿರುಕುಳ ನೀಡುತ್ತಿದ್ದ ಎಂಬ ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವ ಸಹಚರರ ಜೊತೆ ಸೇರಿಕೊಂಡು ಕಾಸರಗೋಡು ಮೂಲದ ಯುವಕನನ್ನು ತಲವಾರಿನಿಂದ ಕಡಿದು ಬರ್ಬರವಾಗಿ ಕೊಲೆಗೈದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಎಂಬಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಕಾಸರಗೋಡು ಮೂಲದ ಸುದರ್ಶನ್(20) ಹತ್ಯೆಯಾದವರು.
ಸುದರ್ಶನ್‍ನನ್ನು ಬೇರೆಡೆ ಹತ್ಯೆ ನಡೆಸಿದ ಬಳಿಕ ತೊಕ್ಕೊಟ್ಟು ಕಾಪಿಕಾಡಿನಲ್ಲಿರುವ ಕೃಷಿ ಸಂಶೋಧನಾ ಕೇಂದ್ರದ ಎದುರುಗಡೆ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ. ತೊಕ್ಕೊಟ್ಟು ನಿವಾಸಿ ಡಿ.ಕೆ. ರಕ್ಷಿತ್ ಕೃತ್ಯ ಎಸಗಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ತಡರಾತ್ರಿ 11 ಗಂಟೆಯ ಸುಮಾರಿಗೆ ಕೆಂಪು ಬಣ್ಣದ ಕಾರಿನಲ್ಲಿ ಬಂದ ಆರೋಪಿಗಳ ತಂಡ ಸುದರ್ಶನ್ ಶವವನ್ನು ಎಸೆದು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ತೊಕ್ಕೊಟ್ಟು ನಿವಾಸಿ ರಕ್ಷಿತ್, ಸುದರ್ಶನ್ ಮೃತದೇಹವನ್ನು ಎಸೆದ ಬಳಿಕ ಉಳ್ಳಾಲ ಪೊಲೀಸ್ ಠಾಣೆಗೆ ಕರೆ ಮಾಡಿ ತನ್ನ ಹೆಸರನ್ನು ರಕ್ಷಿತ್ ಎಂಬುದಾಗಿಯೂ, ಸುದರ್ಶನ್ ಎಂಬಾತನ ಹತ್ಯೆಯನ್ನು ತಾನೇ ನಡೆಸಿದ್ದಾಗಿಯೂ ತಿಳಿಸಿದ್ದಾನೆ. ಸುದರ್ಶನ್ ತನ್ನ ಪ್ರಿಯತಮೆಗೆ ಕಿರುಕುಳ ನೀಡುತ್ತಿದ್ದ. ಆತನಿಗೆ ಎಚ್ಚರಿಕೆ ನೀಡಿದ ಬಳಿಕವೂ ಚಾಳಿ ನಿಲ್ಲಿಸಿರಲಿಲ್ಲ. ಇದೇ ಕಾರಣಕ್ಕೆ ಹತ್ಯೆ ನಡೆಸಿರುವುದಾಗಿ ತಪೆÇ್ಪಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಇಂದು ತಾನೇ ಠಾಣೆಗೆ ಬಂದು ಶರಣಾಗುವುದಾಗಿ ಪೆÇಲೀಸರಿಗೆ ತಿಳಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
error: Content is protected !!