ಕೂಳೂರು ಸೇತುವೆಗೆ ಲಾರಿ ಡಿಕ್ಕಿ

ಮಂಗಳೂರು: ಕೂಳೂರು ಹಳೇ ಸೇತುವೆ ಮೇಲೆ ಲೋಡ್ ಲಾರಿಯೊಂದು ಕಮಾನಿಗೆ ಡಿಕ್ಕಿ ಹೊಡೆದ ಘಟನೆ ಇಂದು ನಸುಕಿನ ಜಾವ ನಡೆದಿದೆ. ಘಟನೆಯಲ್ಲಿ ಸೇತುವೆ ಕಮಾನಿಗೆ ಹಾನಿಯಾಗಿದ್ದು ಲಾರಿ ಅಲ್ಲಿಯೇ ಬಾಕಿಯಾಗಿದೆ. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಹೆದ್ದಾರಿಯಲ್ಲಿ ಕಿಮೀಗಟ್ಟಲೆ ರಸ್ತೆ ಬ್ಲಾಕ್ ಉಂಟಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ.
ಲಾರಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಲಾರಿಯನ್ನು ತೆರವುಗೊಳಿಸಲು ಲೋಡ್ ಖಾಲಿ ಮಾಡುತ್ತಿದ್ದಾರೆ.
error: Content is protected !!