ಸುರತ್ಕಲ್: ಬಾರ್ ನಲ್ಲಿ ಯುವಕನ ಹತ್ಯೆ!


ಮಂಗಳೂರು: ಸುರತ್ಕಲ್ ಜಂಕ್ಷನ್ ಸಮೀಪದ ಬಾರೊಂದರಲ್ಲಿ ನಿನ್ನೆ ತಡರಾತ್ರಿ ತಂಡವೊಂದು ಯುವಕನನ್ನು ಮಾರಕಾಯುಧದಿಂದ ಕಡಿದು ಹತ್ಯೆಗೈದ ಘಟನೆ ನಡೆದಿದೆ. ಹತ್ಯೆಯಾದವನನ್ನು ಸುರತ್ಕಲ್ ಗುಡ್ಡೆಕೊಪ್ಲ ನಿವಾಸಿ ಸಂದೇಶ್(30) ಎಂದು ಹೆಸರಿಸಲಾಗಿದೆ.
ಘಟನೆ ವಿವರ:
ಸಂದೇಶ್ ನಿನ್ನೆ ರಾತ್ರಿ 11 ಗಂಟೆಗೆ ಜೀವನ್ ತಾರಾ ವೈನ್ಸ್ ಹಿಂಭಾಗದ ಬಾರ್ ನಲ್ಲಿ ಸ್ನೇಹಿತರ ಜೊತೆ ಕುಳಿತಿದ್ದು ಈ ವೇಳೆ ಸಂದೇಶ್ ಪರಿಚಿತರೇ ಆಗಿರುವ ಸ್ಥಳೀಯ ಯುವಕರ ತಂಡ ಜಗಳಕ್ಕೆ ಮುಂದಾಗಿದೆ. ನಂತರ ಜಗಳ ದೊಡ್ಡದಾಗಿದ್ದು ತಂಡವು ಮಾರಕಾಯುಧದಿಂದ ದಾಳಿ ನಡೆಸಿ ಹತ್ಯೆಗೈದು ಪರಾರಿಯಾಗಿದೆ.
ಸಂದೇಶ್ ಶಬರಿಮಲೆ ಮಾಲೆ ಧರಿಸಿದ್ದು ನಿನ್ನೆ ಮಧ್ಯಾಹ್ನ ಮಾಲೆ ತೆಗೆದಿದ್ದರು ಎನ್ನಲಾಗಿದೆ. ಈ ಹಿಂದೆ ಸಂಘಟನೆಯಲ್ಲಿ ಜೊತೆಯಾಗಿದ್ದ ಸ್ನೇಹಿತರೇ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಸುರತ್ಕಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೆಲವು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

error: Content is protected !!