“ಪೆನ್ಸಿಲ್ ಬಾಕ್ಸ್” ರಾಜ್ಯಾದ್ಯಂತ ಬಿಡುಗಡೆ


ಮಂಗಳೂರು: ರಝಾಕ್ ಪುತ್ತೂರು ಕತೆ ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ಪೆನ್ಸಿಲ್ ಬಾಕ್ಸ್ ಕನ್ನಡ ಚಿತ್ರ ಇಂದು ನಗರದ ಬಿಗ್ ಸಿನೆಮಾದಲ್ಲಿ ಬಿಡುಗಡೆಗೊಂಡಿತು.

ಜಯಕಿರಣ ಪತ್ರಿಕೆ ಮಾಲಕ ಪ್ರಕಾಶ್ ಪಾಂಡೇಶ್ವರ, ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ಸಂದೀಪ್ ಮಲಾನಿ, ಪ್ರೊ.ಭಾಸ್ಕರ್ ರೈ ಕುಕ್ಕುವಳ್ಳಿ, ರಮೇಶ್ ರೈ ಕುಕ್ಕುವಳ್ಳಿ, ಚಿತ್ರ ನಿರ್ದೇಶಕ ರಝಾಕ್ ಪುತ್ತೂರು, ಚಿತ್ರದ ಬಾಲನಟಿ ದೀಕ್ಷಾ ರೈ, ನಿರ್ಮಾಪಕರು ಹಾಗೂ ಚಿತ್ರತಂಡದ ಸದಸ್ಯರು ಹಾಜರಿದ್ದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಗಣ್ಯರು ಚಿತ್ರಕ್ಕೆ ಶುಭ ಹಾರೈಸಿದರು.

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ… 

https://youtu.be/TT_y68jJq50

error: Content is protected !!