ಕಿನ್ನಿಗೋಳಿ: ಓದಲು ಹೇಳಿದ್ದಕ್ಕೆ ಆತ್ಮಹತ್ಯೆಗೆ ಶರಣಾದ 5ನೇ ಕ್ಲಾಸ್ ಬಾಲೆ!!

 

 

ಮೂಲ್ಕಿ: ಮನೆಯಲ್ಲಿ ಓದಲು ಹೇಳಿದರು ಎಂಬ ಕ್ಷುಲ್ಲಕ ಕಾರಣಕ್ಕೆ 5ನೇ ತರಗತಿ ಕಲಿಯುತ್ತಿದ್ದ ಬಾಲೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಲ್ಕಿ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಬಳಿ ನಡೆದಿದೆ. ಧ್ರುವಿ(10) ಮೃತ ದುರ್ದೈವಿ.


ಕಿನ್ನಿಗೋಳಿ ಮೇರಿ ವೇಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿ ಇಡುತ್ತಿದ್ದ ಧ್ರುವಿ ಇಂದು ಸಂಜೆ ಶಾಲೆಯಿಂದ ಬಂದು ಆಟವಾಡುತ್ತಿದ್ದಳು. ಈ ವೇಳೆ ಮನೆಯಲ್ಲಿ ಓದುವಂತೆ ಹೇಳಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ನೊಂದ ಧ್ರುವಿ ಸಾವಿಗೆ ಶರಣಾಗಿದ್ದಾಳೆ. ಮೂಲ್ಕಿ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

error: Content is protected !!