ಮತ್ತೆ ಶಬರಿಮಲೆಗೆ ಬಂದ ‘ಬಿಂದು’ ಮೇಲೆ ದಾಳಿ!!

ಎರ್ನಾಕುಲಂ: ಕಳೆದ ಜನವರಿ ತಿಂಗಳಲ್ಲಿ ಶಬರಿಮಲೆಗೆ ಪ್ರವೇಶ ಮಾಡಿದ್ದ ಹೋರಾಟಗಾರ್ತಿ ಬಿಂದು ಅಮ್ಮಿನಿ ಇಂದು ಮುಂಜಾನೆ ಮತ್ತೆ ಶಬರಿಮಲೆ ಏರಲು ಬಂದಿದ್ದು ಈ ವೇಳೆ ತಂಡವೊಂದು ಪೆಪ್ಪರ್ ಸ್ಪ್ರೇ ಮೂಲಕ ದಾಳಿ ನಡೆಸಿ ತಡೆಹಿಡಿದಿದೆ. ಬಿಂದು ಮೇಲೆ ವ್ಯಕ್ತಿಯೋರ್ವ ಕರಿಮೆಣಸಿನ ಪುಡಿಯನ್ನು ಸ್ಪ್ರೇ ಮಾಡಿದ್ದಾನೆ.
ನಂತರ ಮಾಧ್ಯಮಗಳ ಮುಂದೆ ಮಾತನಾಡಿದ ಬಿಂದು ಇಂದು ಮುಂಜಾನೆ ಎರ್ನಾಕುಲಂ ಪೆÇಲೀಸ್ ಕಮಿಷನರ್ ಆಫೀಸ್ ಮುಂಭಾಗ ವ್ಯಕ್ತಿಯೋರ್ವ ನನ್ನ ಮೇಲೆ ದಾಳಿ ಮಾಡಿದ್ದಾನೆ ಎಂದಿದ್ದಾರೆ. 10ರಿಂದ 50 ವರ್ಷದೊಳಗಿನ ನಡುವಿನ ಮಹಿಳೆಯರು ಶಬರಿ ಮಲೆ ದೇವಸ್ಥಾನ ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು ಭಾರೀ ಹೋರಾಟಕ್ಕೆ ಕಾರಣವಾಗಿತ್ತು. ಬಿಂದು ಹಾಗೂ ಕನಕದುರ್ಗಾ ತೀವ್ರ ವಿರೋಧದ ಮಧ್ಯೆಯೂ ಶಬರಿಮಲೆ ಪ್ರವೇಶಿಸಿದ್ದರು. ನಂತರದ ದಿನಗಳಲ್ಲಿ ಕನಕದುರ್ಗಾ ಮನೆಯಿಂದ ಹೊರದಬ್ಬಲ್ಪಟ್ಟರೆ ಆಕೆಯ ಮಗಳು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಳು. ಬಿಂದು ಮತ್ತೆ ಶಬರಿಮಲೆ ಏರಲು ಮುಂದಾಗಿರುವುದು ಅಯ್ಯಪ್ಪ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ವಿಡಿಯೋ ವೀಕ್ಷಿಸಲು ಕ್ಲಿಕ್ ಮಾಡಿ… 
error: Content is protected !!