ಬ್ಯಾಂಕ್ ಉದ್ಯೋಗಕ್ಕೆ ಸೇರಲು ತೆರಳುತ್ತಿದ್ದ ಮಾಣಿಯ ಯುವಕ ಹಾಸನದಲ್ಲಿ ನಡೆದ ಭೀಕರ ಅಪಘಾತಕ್ಕೆ ಬಲಿ: ಘಟನೆಯ ಬೆಚ್ಚಿಬೀಳಿಸುವ ವಿಡಿಯೋ

ಮಂಗಳೂರು: ಹಾಸನದಲ್ಲಿ ಕಾರಿಗೆ ಬಸ್ ಡಿಕ್ಕಿಯಾದ ಪರಿಣಾಮ ಬಸ್ ಪಲ್ಟಿಯಾಗಿ ಮೂಲತಃ ಮಾಣಿ  ನಿವಾಸಿ ಚಂದಪ್ಪ ಮೂಲ್ಯ ಅವರ ಮೊಮ್ಮಗ ಉಗ್ಗಪ್ಪ ಮೂಲ್ಯ ಅವರ ಮಗ ಅಭಿಷೇಕ್(27) ಮೃತಪಟ್ಟಿದ್ದಾರೆ. ನಿನ್ನೆ ತಡರಾತ್ರಿ 1:49ರ ಸುಮಾರಿಗೆ ಘಟನೆ ನಡೆದಿದ್ದು ಘಟನೆಯ ವಿಡಿಯೋ `ನ್ಯೂ ಪೋಸ್ಟ್’ಗೆ ಲಭ್ಯವಾಗಿದೆ.

ಬೆಂಗಳೂರಿನ ಖಾಸಗಿ ಬ್ಯಾಂಕ್ ಒಂದರಲ್ಲಿ ಕೆಲಸ ಸಿಕ್ಕಿದ್ದರಿಂದ ಇಂದು ಕೆಲಸಕ್ಕೆ ಸೇರುವ ಉದ್ದೇಶದಿಂದ ನಿನ್ನೆ ರಾತ್ರಿ ಮಾಣಿಯಿಂದ ಅಭಿಷೇಕ್ ಬಸ್ ಹತ್ತಿದ್ದರು. ಆದರೆ ದುರಾದೃಷ್ಟ ಅಭಿಷೇಕ್ ಬೆನ್ನುಬಿದ್ದಿದ್ದು ಅಪಘಾತದಲ್ಲಿ ದಾರುಣ ಸಾವನ್ನಪ್ಪಿದ್ದಾರೆ. ಅಭಿಷೇಕ್ ಅವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿತ್ತು. ನಿನ್ನೆ ಅವರ ಹತ್ತಿರದ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆಂದು ಮಾಣಿಗೆ ಬಂದಿದ್ದರು. ಮದುವೆ ಮುಗಿಸಿ ವಾಪಾಸು ಬಸ್ ಮೂಲಕ ಬೆಂಗಳೂರಿಗೆ ತಮ್ಮನ ಜೊತೆಯಲ್ಲಿ ಪ್ರಯಾಣ ಬೆಳೆಸಿದ್ದರು. ಘಟನೆಯಲ್ಲಿ ಇರವ ತಮ್ಮನಿಗೂ ಗಾಯಗಳಾಗಿದ್ದು ಅತ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಬೆಚ್ಚಿಬೀಳಿಸುವ ವಿಡಿಯೋಗಾಗಿ ಕ್ಲಿಕ್ ಮಾಡಿ… 
error: Content is protected !!