ವಾಕಿಂಗ್ ತೆರಳಿದ್ದ ವ್ಯಕ್ತಿಯ ಅಪಹರಿಸಿ ಐವರಿಂದ ಗ್ಯಾಂಗ್ ರೇಪ್!!


ಮುಂಬೈ: ವಾಕಿಂಗ್ ತೆರಳಿದ್ದ 32ರ ಹರೆಯದ ವ್ಯಕ್ತಿಯನ್ನು ಅಪಹರಿಸಿದ ಕಾಮುಕರ ತಂಡ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಸೋಮವಾರ ನಡೆದಿದ್ದು ಸಂತ್ರಸ್ತ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಸ್ಥಿತಿ ಚಿಂತಾಜನಕವಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಶಿಯ ಸಾಗರ್ ವಿಹಾರ್ ಲೇಕ್ ನಿವಾಸಿ ವ್ಯಕ್ತಿ ಕಂಪೆನಿಯೊಂದರಲ್ಲಿ ಅಡ್ಮಿನ್ ಆಗಿದ್ದು ಸೋಮವಾರ ಸಂಜೆ ವಾಕಿಂಗ್ ಹೋಗಿದ್ದಾಗ ಕಾರಿನಲ್ಲಿ ಬಂದಿದ್ದ ಐವರು ಯುವಕರು ಆತನನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅತ್ಯಾಚಾರಗೈದ ಕಾಮುಕರು ಆತನ ಗುಪ್ತಾಂಗಕ್ಕೆ ತೀವ್ರ ಹಾನಿಯೆಸಗಿದ್ದಾರೆ. ಬಳಿಕ ಫ್ಲ್ಯಾಟ್ ಪಕ್ಕದ ರಸ್ತೆಯಲ್ಲಿ ಎಸೆದು ಪರಾರಿಯಾಗಿದ್ದಾರೆ. ರಾತ್ರಿಯಾದರೂ ಮನೆಗೆ ಬಾರದೆ ಇದ್ದಾಗ ಮನೆಮಂದಿ ಹುಡುಕಾಟ ನಡೆಸಿದ್ದು ಈ ವೇಳೆ ಆತ ಪತ್ತೆಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ವಾಶಿ ಠಾಣಾ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

error: Content is protected !!