ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಆರ್.ಧನರಾಜ್ ಆಯ್ಕೆ?

ಬೆಂಗಳೂರು- ರಾಜ್ಯದಲ್ಲಿ ಮೈತ್ರಿ ಸರಕಾರ ಮುರಿದು ಬಿದ್ದ ಬಳಿಕ ಜಾತ್ಯಾತೀತ ಜನತಾದಳ ಮುಂಬರುವ ಉಪಚುನಾವಣೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದೆ. ಈ ಮಧ್ಯೆ ಎಲ್ಲಾ ಜಿಲ್ಲಾ ಘಟಕಗಳಲ್ಲೂ ಬದಲಾವಣೆ ತರಲು ಪಕ್ಷ ಮುಂದಾಗಿದೆ. ಕೆಲವು ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷರು ನಿಷ್ಕ್ರಿಯರಾಗಿದ್ದು ಪಕ್ಷ ಸಂಘಟನೆಯಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಬಹುತೇಕ ಜಿಲ್ಲೆಗಳಲ್ಲಿ ಅಧ್ಯಕ್ಷರ ಜತೆಗೆ ಪದಾಧಿಕಾರಿಗಳನ್ನು ಕೂಡಾ ಬದಲಾಯಿಸಿ ಪಕ್ಷಕ್ಕೆ ಹೊಸ ಚೈತನ್ಯ ತುಂಬಲು ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ತೀರ್ಮಾನಿಸಿದ್ದಾರೆ.
ಶೀಘ್ರದಲ್ಲೇ ದೇವೇಗೌಡರು ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಹೊರಡಲಿದ್ದು ಕಾರ್ಯಕರ್ತರಿಗೆ ಪಕ್ಷ ಸಂಘಟಿಸಲು ಹುರಿದುಂಬಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಜೆಡಿಎಸ್‍ಗೆ ಹೊಸ ಅಧ್ಯಕ್ಷರ ನೇಮಕವಾಗಲಿದೆ. ಜಿಲ್ಲೆಯ ಜೆಡಿಎಸ್‍ನ ಅಧ್ಯಕ್ಷ ಮಹಮ್ಮದ್ ಕುಂಞ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಏರಿದ್ದು, ಆ ಸ್ಥಾನಕ್ಕೆ ಜೆಡಿಎಸ್‍ನ ಹಿರಿಯ ಪದಾಧಿಕಾರಿ ಕಾರ್ಯಕರ್ತ ಆರ್.ಧನರಾಜ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಆರ್.ಧನರಾಜ್ ಅವರು ಜೆಡಿಎಸ್‍ನಲ್ಲಿ ಹಲವಾರು ವರ್ಷಗಳಿಂದ ಪಕ್ಷ ಸಂಘಟಿಸಿದವರು. ಜೆಡಿಎಸ್‍ನ ಹಿರಿಯ ಮುಖಂಡರಾದ ಅಮರನಾಥ್ ಶೆಟ್ಟಿ ಮತ್ತು ಎಂ.ಬಿ.ಸದಾಶಿವ ಅವರು ರಾಜ್ಯ ಘಟಕದಲ್ಲಿ ಉಪಾಧ್ಯಕ್ಷರಾಗಿರುವುದರಿಂದ ಜಿಲ್ಲೆಯಲ್ಲಿರುವ ಜೆಡಿಎಸ್ ಘಟಕಕ್ಕೆ ಹೊಸ ಪದಾಧಿಕಾರಿಗಳ ನೇಮಕ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
error: Content is protected !!