ಸದ್ಯದಲ್ಲೇ ಸೆಂಚುರಿ ಬಾರಿಸಲಿದೆ ಈರುಳ್ಳಿ!

ನವದೆಹಲಿ- ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕೆಜಿಗೆ 60 ರೂ. ಗಡಿ ದಾಟಿದೆ. ಪಂಜಾಬ್‍ನಲ್ಲಿ ಈಗಲೇ 70 ರೂ. ಏರಿಕೆಯಾಗಿದೆ. ಮುಂಬರುವ ದಿನಗಳಲ್ಲಿ ಈರುಳ್ಳಿ 100ರ ಗಡಿ ದಾಟಿದರೆ ಅಚ್ಚರಿಪಡಬೇಕಿಲ್ಲ.
ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಈರುಳ್ಳಿ ಕೊರತೆ ಇಲ್ಲ. ಇನ್ನೂ ಒಂದೂವರೆ ತಿಂಗಳಿಗಾಗುವಷ್ಟು ಈರುಳ್ಳಿ ರಾಜ್ಯದಲ್ಲಿ ಸಂಗ್ರಹವಿದೆ. ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಭಾರೀ ಮಳೆ ಹಾಗೂ ಪ್ರವಾಹ ಕಾಣಿಸಿಕೊಂಡ ಪರಿಣಾಮ ಈರುಳ್ಳಿ ಕೊರತೆ ಕಂಡುಬಂದಿದೆ. ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ ಈರುಳ್ಳಿ ಉತ್ಪಾದನೆ ಕುಂಠಿತವಾಗಿದೆ. ಜೊತೆಗೆ ರಾಜ್ಯಗಳಲ್ಲಿ ಮಳೆ ಹಾಗೂ ಶೀತದ ಹವಾಮಾನ ಇರುವ ಕಾರಣ ಗೋಡೌನ್‍ನಲ್ಲಿರುವ ಈರುಳ್ಳಿ ಕೂಡ ಕೊಳೆಯಲಾರಂಭಿಸಿದೆ. ಹೀಗಾಗಿ ದೀಪಾವಳಿ ಮುಗಿಯುವವರೆಗೆ ಈರುಳ್ಳಿ ಬೆಲೆ ಏರಿಕೆ ಮುಂದುವರೆಯುವ ಎಲ್ಲಾ ಸಾಧ್ಯತೆ ಇದೆ.
error: Content is protected !!