
ಮಂಗಳೂರು: ದೇಶದೆಲ್ಲೆಡೆ ಸ್ವಚ್ಛ ಭಾರತ ಅಭಿಯಾನ ನಡೆಯುತ್ತಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯ ಸೂರಿಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಖ್ಯರಸ್ತೆಯಲ್ಲೇ ತ್ಯಾಜ್ಯ ರಾಶಿಬಿದ್ದು ಕೊಳೆತು ನಾರುತ್ತಿದೆ. ಈ ಬಗ್ಗೆ ಗಮನಹರಿಸಬೇಕಾದ ಪಂಚಾಯತ್ ಆಡಳಿತ ಕಣ್ಣಿದ್ದೂ ಕುರುಡಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸೂರಿಂಜೆಗೆ ತೆರಳುವ ರಸ್ತೆಯ ಬದಿಯಲ್ಲೇ ನಿತ್ಯ ಸ್ಥಳೀಯರು, ವಾಹನ ಸವಾರರು ಕಸ, ತ್ಯಾಜ್ಯವನ್ನು ಸುರಿದು ಹೋಗುತ್ತಿದ್ದಾರೆ. ಇದರಿಂದ ತ್ಯಾಜ್ಯದ ರಾಶಿ ದಿನೇ ದಿನೇ ಬೆಳೆಯುತ್ತಿದೆ. ಇದರಿಂದ ಪರಿಸರದಲ್ಲಿ ದುರ್ನಾತ ಹರಡಿದ್ದು ಇಲ್ಲಿನ ತ್ಯಾಜ್ಯವನ್ನು ಕಾಗೆ, ನಾಯಿಗಳು ಎಲ್ಲೆಡೆ ಪಸರಿಸುವ ಕೆಲಸ ಮಾಡುತ್ತಿವೆ. ಇನ್ನಾದರೂ ಪಂಚಾಯತ್ ಆಡಳಿತ `ಸ್ವಚ್ಛ ಸೂರಿಂಜೆ’ ಕಲ್ಪನೆ ಸಾಕಾರಗೊಳಿಸಲು ಶ್ರಮಿಸುತ್ತೋ ಕಾದು ನೋಡಬೇಕಿದೆ.