ತಾಲಿಬಾನ್ ಆತ್ಮಾಹುತಿ ದಾಳಿ: 10ಕ್ಕೂ ಹೆಚ್ಚು ಸಾವು

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‍ನಲ್ಲಿ ತಾಲಿಬಾನ್ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ ಹತ್ತು ಮಂದಿ ಸಾವನ್ನಪ್ಪಿದ್ದು ನಲವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನ್ಯಾಟೋ ಪಡೆಗಳ ಮುಖ್ಯ ಕಚೇರಿ, ಅಮೆರಿಕದ ರಾಯಭಾರ ಕಚೇರಿ ಬಳಿ ಸ್ಫೋಟ ಸಂಭವಿಸಿದ್ದು ಹತ್ತಿರದ ಮಳಿಗೆಗಳು ಹಾಗೂ ಅಲ್ಲಿದ್ದ ಕಾರುಗಳು ಧ್ವಂಸವಾಗಿವೆ. ಈ ದಾಳಿಯ ಹೊಣೆಯನ್ನು ತಾಲಿಬಾನ್ ಉಗ್ರರು ಹೊತ್ತುಕೊಂಡಿದ್ದಾರೆ.
ಈ ಘಟನೆಯಲ್ಲಿ ಹತ್ತು ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಹಾಗೂ ನಲವತ್ತೆರಡು ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಆಂತರಿಕ ಸಚಿವಾಲಯದ ವಕ್ತಾರರಾದ ನಸ್ರತ್ ರಹಿಮಿ ಹೇಳಿದ್ದಾರೆ. ದಾಳಿಯ ಫೂಟೇಜ್ ಹಾಗೂ ಫೆÇೀಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ ಲೋಡ್ ಮಾಡಲಾಗಿದೆ. ಸಾಕ್ಷಿಗಳು ಹೇಳುವ ಪ್ರಕಾರ ಆತ್ಮಹತ್ಯಾ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದು ಆ ವೇಳೆ ಹಲವು ಮಂದಿ ಅಲ್ಲಿದ್ದರು. ಕೆಲವರು ರಸ್ತೆ ದಾಟುತ್ತಿದ್ದರು. ಬಿಸ್ಮಿಲ್ಲಾ ಅಹ್ಮದಿ ಎಂಬವರು ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವ್ ಆಗಿದ್ದಾರೆ.
error: Content is protected !!