
ಕ್ಯಾಲಿಫೋರ್ನಿಯಾ: ಕಳೆದ ಸೋಮವಾರ ಇಲ್ಲಿನ ಸಾಂತಾ ಕ್ರೂಜ್ ದ್ವೀಪದಲ್ಲಿ ದೋಣಿಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 34 ಮಂದಿ ಸಾವಿಗೀಡಾಗಿದ್ದು ಇವರಲ್ಲಿ ಭಾರತೀಯ ದಂಪತಿಯೂ ಸೇರಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಅಧಿಕೃತ ಮಾಹಿತಿ ಲಭ್ಯವಾಗಿಲ್ಲ ಎಂದು ದಂಪತಿಯ ಕುಟುಂಬಸ್ಥರು ತಿಳಿಸಿದ್ದಾರೆ. ಸ್ಕೂಬಾ ಡೈವರ್ಸ್ ಗಳನ್ನು ಹೊತ್ತಿದ್ದ ದೋಣಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿತ್ತು, ನಂತರ ದೋಣಿ ನೀರಿನಲ್ಲಿ ಮುಳುಗಿದ ಪರಿಣಾಮ ಈ ದುರಂತ ಸಂಭವಿಸಿದೆ. ಮಹಾರಾಷ್ಟ್ರದ ನಾಗ್ಪುರ ಮೂಲದ ಸಂಜೀರಿ ದಿಯೋಪುಜಾರಿ ಮತ್ತು ಕೌಸ್ತುಭ ನಿರ್ಮಲ್ ಎಂಬುವವರು ಎರಡು ವರ್ಷಗಳಿಂದ ಅಮೆರಿಕದಲ್ಲಿ ವಾಸವಿದ್ದರು. ದಂತವೈದ್ಯೆಯಾಗಿದ್ದ ಸಂಜೀರಿ, ಅಮೆರಿಕದ ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕೌಸ್ತುಭ ಎಂಬುವವರನ್ನು ಮದುವೆಯಾಗಿದ್ದರು. ಇಬ್ಬರೂ ಕ್ಯಾಲಿಫೆÇೀರ್ನಿಯಾದ ಸಾಂತಾ ಕ್ರೂಜ್ಗೆ ಸ್ಕೂಬಾ ಡೈವಿಂಗ್ಗೆ ತೆರಳಿದ್ದಾಗ ಈ ಅವಘಡ ಸಂಭವಿಸಿತ್ತು. ದೋಣಿಯಲ್ಲಿದ್ದವರೆಲ್ಲ ನೀರಿನಲ್ಲಿ ಮುಳುಗಿದ್ದು ಅವರೊಂದಿಗೆ ಈ ದಂಪತಿಯೂ ಇದ್ದರು.