ಬೆಳ್ತಂಗಡಿ ಮೂಲದ ವಿಜ್ಞಾನಿ ಅಮೇರಿಕಾದಲ್ಲಿ ಚಾರಣ ಸಂದರ್ಭ ಮೃತ್ಯು

ಮಂಗಳೂರು- ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಫಂಡಿಜೆ ಮೂಲದ ಅಮೆರಿಕಾದಲ್ಲಿ ವಾಸ್ತವ್ಯವಿದ್ದ ಚೈತನ್ಯ ಸಾಠೆ(36) ಎಂಬವರು ಆ.24ರಂದು ಪರ್ವತಾರೋಹಣ ಸಂದರ್ಭ ಪ್ರಪಾತಕ್ಕೆ ಬಿದ್ದು ದುರ್ಮರಣವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.
ಅಮೆರಿಕಾದ ಮೌಂಟ್ ಹುಡ್ ಲೋವರ್ ಜಾರ್ಜ್‍ನ ಟೆರ್ರಾಬಾನ್ ವ್ಯಾಪ್ತಿಯ ಸ್ಮಿತ್ ರಾಕ್‍ಸ್ಟೇಟ್ ಪಾರ್ಕ್ ಎಂಬಲ್ಲಿ 100 ಅಡಿ ಆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಇವರು ಪೆÇೀರ್ಟ್‍ಲ್ಯಾಂಡ್ ಮೂಲದ `ಮಾಝಾಮಾಸ್’ ಎಂಬ ಪರ್ವತಾರೋಹಿ ಸಂಘಟನೆಯಲ್ಲಿದ್ದು ಅನೇಕ ಚಾರಣಗಳಲ್ಲಿ ಪಾಲ್ಗೊಂಡಿದ್ದರು. ಸ್ಮಿತ್‍ರಾಕ್ ಗಿರಿಶಿಖರವನ್ನು ಇಳಿಯುತ್ತಿರುವ ಸಂದರ್ಭ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.
error: Content is protected !!