ಹೆಲ್ಮೆಟ್ ಹಾಕದೆ ಮಹಿಳಾ ಪೊಲೀಸ್ ಸಂಚಾರ: ಫೋಟೋ ವೈರಲ್

ಮಂಗಳೂರು: ಬೈಕ್ ಸವಾರರನ್ನು ಹೆಲ್ಮೆಟ್ ಹಾಕಿಲ್ಲ ಎಂದು ರಸ್ತೆ, ಓಣಿಗಳಲ್ಲಿ ಹಿಡಿದು ಕೇಸು ಜಡಿಯೋ ಪೊಲೀಸರೇ ಹೆಲ್ಮೆಟ್ ಹಾಕದೆ ಸಂಚರಿಸಿದ್ರೆ ಹೇಗೆ? ಇವತ್ತು ಆಗಿದ್ದು ಕೂಡ ಅದೇ. ಹೆಲ್ಮೆಟ್ ಹಾಕದೇ ಬೈಕಲ್ಲಿ ಸಹಪ್ರಯಾಣಿಕರಾಗಿ ಓಡಾಡುತ್ತಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ನಗರದ ಜ್ಯೋತಿ ಬಳಿ ಕಣ್ಣಿಗೆ ಬಿದ್ದಿದ್ದು ಅನಾಮಧೇಯ ವ್ಯಕ್ತಿ ಕ್ಲಿಕ್ ಮಾಡಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪೊಲೀಸರು ಟ್ರಾಫಿಕ್ ನಿಯಮಗಳು ಪಾಲನೆ ಮಾಡುವಲ್ಲಿ ಶ್ರಮಿಸುವವರು ಅವರೇ ಹೀಗೇ ಮಾಡಿದ್ರೆ ಹೇಗೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಕೆಎ 35 ನೋಂದಣಿ ಬೈಕಲ್ಲಿ ಕೂಲಿಂಗ್ ಗ್ಲಾಸ್ ಹಾಕ್ಕೊಂಡು ಕೈಲಿ ಮೊಬೈಲ್ ಹಿಡಿದಿರೋ ಮಹಿಳಾ ಪೊಲೀಸ್ ಸಿಬ್ಬಂದಿ ಯಾರೆನ್ನುವುದು ತಿಳಿದುಬಂದಿಲ್ಲ. ತುರ್ತು ಸಂದರ್ಭದಲ್ಲಿ ಹೋಗುವಾಗ ತೆಗೆದಿರೋ ಚಿತ್ರ ಆಗಿರಬಹುದು ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!