`ನ್ಯೂ ಪೋಸ್ಟ್’ ವರದಿ ಇಂಪ್ಯಾಕ್ಟ್! ಬಸ್ಸಲ್ಲಿ ವಿದ್ಯಾರ್ಥಿಗಳ ಸರ್ಕಸ್: ಚಾಲಕನ ಲೈಸೆನ್ಸ್, ಪರ್ಮಿಟ್ ಅಮಾನತು!!

ಮಂಗಳೂರು: `ಬಸ್ಸು ಸಾಕಷ್ಟಿದೆ, ಆದರೆ ಇಲ್ಲಿ ಮಕ್ಕಳು ಸಂಚರಿಸೋದೇ ಹೀಗೆ’ ಎನ್ನುವ ವರದಿ ಪ್ರಕಟಿಸಿದ್ದ `ನ್ಯೂ ಪೋಸ್ಟ್’ ವರದಿಗೆ ತಕ್ಷಣ ಪ್ರತಿಕ್ರಿಯಿಸಿರುವ ಕಮಿಷನರ್ ಸಂದೀಪ್ ಪಾಟೀಲ್ ಅವರು `ಮದರ್ ಇಂಡಿಯಾ’ ಹೆಸರಿನ ಖಾಸಗಿ ಬಸ್ ಚಾಲಕನ ಲೈಸೆನ್ಸ್ ಹಾಗೂ ಬಸ್ಸಿನ ಪರ್ಮಿಟ್ ಅನ್ನು ಅಮಾನತುಗೊಳಿಸಿ ಕ್ರಮ ಜರುಗಿಸಿದ್ದಾರೆ. ಮೂಡಬಿದ್ರೆ ಬಳಿ ಶಾಲೆ, ಕಾಲೇಜ್ ವಿದ್ಯಾರ್ಥಿಗಳು ಬಸ್ಸಿನ ಫುಟ್ ಬೋರ್ಡ್ ಮತ್ತು ಹಿಂಬದಿ ಏಣಿಯಲ್ಲಿ ಅಪಾಯಕಾರಿಯಾಗಿ ನೇತಾಡುತ್ತಾ ಸಂಚರಿಸುವ ಬಗ್ಗೆ ವರದಿ ಪ್ರಕಟಿಸಿ ಇಲಾಖೆ ಎಚ್ಚೆತ್ತುಕೊಳ್ಳುವಂತೆ ಮಾಡಲಾಗಿತ್ತು. ಸೂರಜ್ ಜೈನ್ ಎಂಬವರು ಈ ಭಾವಚಿತ್ರವನ್ನು ಕ್ಲಿಕ್ ಮಾಡಿದ್ದು ಸಂಭಾವ್ಯ ಅನಾಹುತದ ಬಗ್ಗೆ ಎಚ್ಚರಿಸಿ `ನ್ಯೂ ಪೋಸ್ಟ್’ ಸಾಮಾಜಿಕ ಕಳಕಳಿಯ ವರದಿ ಪ್ರಕಟಿಸಿತ್ತು. ಕಮಿಷನರ್ ಸಂದೀಪ್ ಪಾಟೀಲ್ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಜರುಗಿಸಿದ್ದು ಶ್ಲಾಘನೆಗೆ ಪಾತ್ರವಾಗಿದೆ.

 

ಹಿಂದಿನ ಸುದ್ದಿಗಾಗಿ ಕ್ಲಿಕ್ ಮಾಡಿ…

ಬಸ್ಸು ಸಾಕಷ್ಟಿದೆ, ಆದ್ರೆ ಇಲ್ಲಿ ಶಾಲೆ ಕಾಲೇಜ್ ಮಕ್ಕಳು ಸಂಚರಿಸೋದೇ ಹೀಗೇ…!!

One thought on “`ನ್ಯೂ ಪೋಸ್ಟ್’ ವರದಿ ಇಂಪ್ಯಾಕ್ಟ್! ಬಸ್ಸಲ್ಲಿ ವಿದ್ಯಾರ್ಥಿಗಳ ಸರ್ಕಸ್: ಚಾಲಕನ ಲೈಸೆನ್ಸ್, ಪರ್ಮಿಟ್ ಅಮಾನತು!!

Leave a Reply

Your email address will not be published. Required fields are marked *

error: Content is protected !!