ಮುಂಬೈ ಪ್ರವಾಹಕ್ಕೆ ಸಿಲುಕಿದ `ಮಹಾಲಕ್ಷ್ಮಿ ಎಕ್ಸ್ ಪ್ರೆಸ್’ ಪ್ರಯಾಣಿಕರ ರಕ್ಷಣೆಗೆ ಹರಸಾಹಸ

ಮುಂಬೈ: ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು ಮುಂಬೈ-ಕೊಲ್ಹಾಪುರ ಮಧ್ಯೆ ಸಂಚರಿಸುವ `ಮಹಾಲಕ್ಷ್ಮೀ’ ಮಾರ್ಗಮಧ್ಯದಲ್ಲೇ ಬಾಕಿಯಾಗಿದೆ. ಅಂದಾಜು 2 ಸಾವಿರ ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ರೈಲು ಹಳಿಯ ಮೇಲೆಲ್ಲಾ ನೀರು ತುಂಬಿರುವ ಕಾರಣ ಮುಂದೆ ಚಲಿಸದೆ ನಿಂತಿದೆ.


ರೈಲಿನಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಸುರಕ್ಷಿತವಾಗಿ ಏರ್‍ಲಿಫ್ಟ್ ಮಾಡಲಾಗುತ್ತದೆ ಎಂದು ಕೇಂದ್ರ ರೈಲ್ವೇ ಇಲಾಖೆ ತಿಳಿಸಿದೆ. ಮುಂಬೈನಿಂದ 100 ಕಿಮೀ ದೂರದಲ್ಲಿರುವ ಬದ್ಲಾಪುರ ಗ್ರಾಮದಲ್ಲಿ ರೈಲು ಪ್ರವಾಹದಲ್ಲಿ ಸಿಲುಕಿಕೊಂಡಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಎನ್‍ಡಿಆರ್ ಎಫ್ ರಕ್ಷಣಾಪಡೆ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಮಳೆ ಸ್ವಲ್ಪ ಕಡಿಮೆಯಾದ ಬಳಿಕ ಪ್ರಯಾಣಿಕರನ್ನು ಏರ್‍ಲಿಫ್ಟ್ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಪ್ರಯಾಣಿಕರು ರೈಲಿನಿಂದ ಕೆಳಗಿಳಿಯದಂತೆ ಸೂಚಿಸಲಾಗಿದೆ.

One thought on “ಮುಂಬೈ ಪ್ರವಾಹಕ್ಕೆ ಸಿಲುಕಿದ `ಮಹಾಲಕ್ಷ್ಮಿ ಎಕ್ಸ್ ಪ್ರೆಸ್’ ಪ್ರಯಾಣಿಕರ ರಕ್ಷಣೆಗೆ ಹರಸಾಹಸ

Leave a Reply

Your email address will not be published. Required fields are marked *

error: Content is protected !!